ಕೊಲ್ಕಾತಾ, ನವೆಂಬರ್ 18: ಘನತ್ಯಾಜ್ಯ ವಸ್ತುಗಳ ಅತ್ಯುತ್ತಮ ನಿರ್ವಹಣೆಯ ಕುರಿತಂತೆ ನೀಡಲಾಗುವ ‘ಐಕಾನ್ ಇಂಟರ್ ನ್ಯಾಷನಲ್’ ಪ್ರಶಸ್ತಿಯನ್ನು ಭಟ್ಕಳ ಪುರಸಭಾ ಅಧ್ಯಕ್ಷ ಪರ್ವೇಜ್ ಕಾಶೀಮ್ಜಿ ಕೋಲಕ್ಕತ್ತಾದಲ್ಲಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಕೃಷ್ಣಪ್ಪ, ಆರೋಗ್ಯಾಧಿಕಾರಿ ಅನಿಲ್ ಪ್ರಭು ಮುಂತಾದವರು ಉಪಸ್ಥಿತರಿದ್ದರು.